ಆಳಿಲು ಸೇವೆ ಅಂದರೇ ಸಣ್ಣ ಸೇವೆ ಅಲ್ಲ - ಯಾರು ಕಲಿಸದ ಪಾಠಗಳು
ಆಳಿಲು ಸೇವೆ ಅಂದರೇ ಸಣ್ಣ ಸೇವೆ ಅಲ್ಲ - ಯಾರು ಕಲಿಸದ ಪಾಠಗಳು
ಒಂದು ಸಣ್ಣ ಕತೆ - ನಮ್ಮ ಮುಖ್ಯ ಪಾತ್ರಗಳು ಆನೆಯಲ್ಲ, ದುರ್ಗೆಯಲ್ಲ, ದೊಡ್ಡ ದೈತ್ಯರು ಅಲ್ಲ. ಇದು ಒಂದು ಸಣ್ಣ ಆಳಿಲಿನ ಕಥೆ. ವಾನರಸೇನೆ ರಾಮನು ನಿರ್ಮಾಣಿಸುತ್ತಿದ್ದ ಸೇತುವೆಗೆ ತಮ್ಮ ಶಕ್ತಿ ಹಾಗೂ ಶ್ರದ್ಧೆಯಿಂದ ಬಂಡೆಗಳನ್ನು ತೆಗೆದು ಸಮುದ್ರದಲ್ಲಿ ಹಾಕುತಿದ್ದರು. ಆದರೆ ಅಲ್ಲಿ ಒಂದು ಸಣ್ಣ ಆಳಿಲು ತನ್ನ ಶಕ್ತಿ ಅನೇಕಬಲವಾಗಿ ಕಾರ್ಯಕ್ಕೆ ತೊಡಗಿಕೊಂಡಿತ್ತು.
ಆ ಆಳಿಲು ಬಂಡೆಗಳೊಡನೆ ಇರುವ ದೂಡು, ಸಣ್ಣ ಮರದ ಕಡ್ಡಿಗಳನ್ನು ಹಿಡಿದುಕೊಂಡು, ಸಮುದ್ರಕ್ಕೆ ಬಿಡುತಿತ್ತು. ತನ್ನ ತೂಕದಷ್ಟು ಕೆಲಸ ಮಾಡುತ್ತಿದ್ದ ಆಳಿಲಿನ ಸೇವೆ ಚಿಕ್ಕದಾದರೂ ಸಹ, ಅದರ ಆತ್ಮಾರ್ಪಣೆಯು ದೊಡ್ಡದ್ದಾಗಿತ್ತು. ಕೆಲವರು ಈ ಆಳಿಲನ್ನು ನೋಡಿ ಹಾಸ್ಯ ಮಾಡಿದರು. 'ಈ ಸಣ್ಣ ಆಳಿಲು ಏನು ಮಾಡಬಲ್ಲದು?' ಎಂಬ ಚಿಂತನೆ ಬಂತು.
ಆದರೆ, ಪ್ರಭು ರಾಮನು ಇದನ್ನು ಗಮನಿಸಿದರು. ಅವರು ಆಳಿಲ ಮುಂದೆ ಹೋಗಿ ಹೀಗೆ ಹೇಳಿದರು, "ನಿನ್ನ ಸೇವೆ ಸಣ್ಣದಾಗಿರಬಹುದು, ಆದರೆ ನಿನ್ನ ಭಕ್ತಿ ಮತ್ತು ಶ್ರದ್ಧೆ ದೊಡ್ಡದು. ನಿನ್ನ ಸೇವೆಯು ನಮ್ಮ ಕಾರ್ಯದಲ್ಲಿ ಮುಖ್ಯವಾಗಿದೆ."
ಇದು ನಮಗೆ ಒಂದು ದೊಡ್ಡ ಪಾಠ ಕಲಿಸುತ್ತದೆ. ಯಾರ ಸೇವೆಯೂ ಸಣ್ಣದಲ್ಲ, ಎಲ್ಲರ ಸೇವೆ ಅಗತ್ಯವಾಗಿದ್ದು, ಎಲ್ಲರೂ ತಮ್ಮ ತಮ್ಮ ಶಕ್ತಿ ಹಾಗೂ ಶ್ರದ್ಧೆಯಿಂದ ಕಾರ್ಯಕ್ಕೆ ತೊಡಗಬೇಕು. ಯಾವ ಕೆಲಸವಾದರೂ, ಭಾವನೆ ಮತ್ತು ಶ್ರದ್ಧೆಯಿಂದ ಮಾಡಿದ್ದಲ್ಲಿ ಅದು ಸಣ್ಣದಾಗಿರಲಿ, ದೊಡ್ಡದಾಗಿರಲಿ, ಯಶಸ್ಸಿಗೆ ಮುನ್ನಡೆಯುತ್ತದೆ. ಆಳಿಲು ಸೇವೆಯು, ನಮಗೆ ಈ ಪಾಠವನ್ನು ಕಲಿಸುತ್ತದೆ - 'ಆಳಿಲು ಸೇವೆ ಅಂದರೆ ಸಣ್ಣ ಸೇವೆ ಅಲ್ಲ'.
ವಾನರಸೇನೆಯು ಲಂಕೆಗೆ ಸೇತುವೆಯನ್ನು ಕಟ್ಟುತ್ತಿರುವಾಗ ಪುಟ್ಟದೊಂದು ಅಳಿಲು ತಾನೂ ಆ ಮಹಾಕಾರ್ಯದಲ್ಲಿ ಭಾಗಿಯಾಗಬೇಕೆಂದು ಬಯಸುತ್ತದೆ; ಸಮುದ್ರದ ನೀರಲ್ಲಿ ಮುಳುಗಿ ಮೈ ಒದ್ದೆ ಮಾಡಿಕೊಂಡು ಬಂದು ಸಮುದ್ರತೀರದ ಮರಳಿನ ಮೇಲೆ ಹೊರಳಾಡಿ ಮೈಗೆಲ್ಲ ಮರಳು ಅಂಟಿಸಿಕೊಳ್ಳುತ್ತದೆ; ನಿರ್ಮಾಣವಾಗುತ್ತಿರುವ ಸೇತುವೆಯ ಮೇಲೆ ಹೋಗಿ ಮೈಕೊಡವಿಕೊಂಡು ಕಲ್ಲುಗಳ ನಡುವೆ ಮರಳನ್ನು ಉದುರಿಸುತ್ತದೆ; ಕಲ್ಲುಗಳು ಒತ್ತಟ್ಟಾಗಿ ಬೆಸೆದು ಸೇತುವೆ ಭದ್ರವಾಗಲಿ ಎಂದು ಅದರ ಆಶಯ.
ಈ ಪರಿಕ್ರಮವನ್ನು ಅಳಿಲು ದಿನವಿಡೀ ದಣಿವಿಲ್ಲದೆ ಮಾಡುತ್ತದೆ. ಸೇತುವೆಯನ್ನು ಕಟ್ಟುತ್ತಿದ್ದ ಕಪಿಗಳು ಇದರದೊಂದು ಉಪದ್ರವ ಎಂದು ಅಳಿಲಿಗೆ ಛೀಮಾರಿ ಹಾಕುವುದೂ ಇದೆ. ಆದರೆ ಅಳಿಲು ಏಕಾಗ್ರತೆಯಿಂದ ತನ್ನ ಪಾಡಿಗೆ ತಾನು ಆ ರೀತಿ ಮರಳು
ತುಂಬುವ ಕೆಲಸ ಮುಂದುವರಿಸುತ್ತದೆ. ಅದರ ಕಾರ್ಯತತ್ಪರತೆಯನ್ನು ಅಲ್ಲೇ ವಿರಮಿಸುತ್ತಿದ್ದ ಶ್ರೀರಾಮ ಗಮನಿಸುತ್ತಾನೆ. ಅದನ್ನೆತ್ತಿಕೊಂಡು ಮೈದಡವಿ ಮುದ್ದಿಸುತ್ತಾನೆ. ಹಾಗೆ ಬೆನ್ನಮೇಲೆ ಶ್ರೀರಾಮನು ಕೈಯಿಂದ ನೇವರಿಸಿದ್ದರಿಂದಲೇ ಅಳಿಲಿಗೆ ಈಗಲೂ ಬೆನ್ನಮೇಲೆ ಮೂರು ಗೆರೆಗಳಿರುವುದು – ಅಂತ ನಂಬಿಕೆ.
ಎಲ್ಲರಿಗೂ ಗೊತ್ತಿರುವ ಕಥೆಯೇ ಇದು. ನಾನೇನೂ ಹೊಸದಾಗಿ ಹೇಳುತ್ತಿರುವುದಲ್ಲ. ಆದರೆ ಅಳಿಲು ಸೇವೆಯ ಕಥೆಯಲ್ಲಿ ನಾವು ಹೆಕ್ಕಿಕೊಳ್ಳಬೇಕಾದ ಕೆಲವು ಅಂಶಗಳಿವೆ. ಅಳಿಲು ಹೇಳಿಕೇಳಿ ಬಲು ಚಿಕ್ಕ ಪ್ರಾಣಿ. ಸಮುದ್ರದ ಮೇಲೆ ಸೇತುವೆ ನಿರ್ಮಾಣದಂಥ ಅತಿ ಕಷ್ಟಕರ ಬೃಹತ್ ಯೋಜನೆಯಲ್ಲಿ ಪುಟಗೋಸಿ ಅಳಿಲು ಏನು ತಾನೆ ನೆರವು ನೀಡೀತು? ಆದರೂ ಅದು ಸುಮ್ಮನೆ ಕುಳಿತು ಕೊಳ್ಳಲಿಲ್ಲ.
ತನ್ನ ಮನಸ್ಸನ್ನೂ ಹೃದಯವನ್ನೂ ಸಮರ್ಪಿಸಿ ಆ ಬೃಹತ್ ಯೋಜನೆಯ ಸಂಕಲ್ಪದಲ್ಲಿ ತೊಡಗಿಸಿಕೊಂಡಿತು; ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿತು. ಸೇತುವೆಯ ಅಗಾಧತೆಯ ಮುಂದೆ ಆ ಅಳಿಲು ಉದುರಿಸಿದ ಮರಳಿನ ಕಣಗಳು ಏನೇನೂ ಅಲ್ಲ. ಆದರೇನಂತೆ, ಅದರ ಸೇವಾ ಮನೋಭಾವ, ಒಂದು ಸದುದ್ದೇಶಕ್ಕಾಗಿ ದೈಹಿಕ ಶ್ರಮದ ಸಮರ್ಪಣೆ ಸಾಟಿಯಿಲ್ಲದವು.
ಆದ್ದರಿಂದಲೇ ಶ್ರೀರಾಮ ಅದನ್ನು ಮೆಚ್ಚಿ ಮುದ್ದಾಡಿದನು. ಸೇವೆ ಸಲ್ಲಿಸಿದ್ದರ ಗುರುತು ತಲೆತಲಾಂತರಗಳಲ್ಲೂ ಅಳಿಲಿಗೆ ಇರುವಂತೆ ಹರಸಿದನು.
ದೇವರಿಗೆ ಸೇವೆಯಲ್ಲಿ ಚಿಕ್ಕದು ದೊಡ್ಡದು ಅಂತ ಇಲ್ಲ. ಹೃದಯಪೂರ್ವಕವಾಗಿ ಮಾಡುವ ಕಿಂಚಿತ್ ಸೇವೆ ಕೂಡ ದೇವರ ದೃಷ್ಟಿಯಲ್ಲಿ ದೊಡ್ಡದೇ. ಇನ್ನೂ ಒಂದು ವಿಚಾರವಿದೆ. ಇಲ್ಲಿ ಅಳಿಲಿನ ನಿಸ್ವಾರ್ಥ ಸೇವೆ ಎಷ್ಟು ಮುಖ್ಯವೋ ಶ್ರೀರಾಮಚಂದ್ರನು ಅದನ್ನು ಗುರುತಿಸಿ ಗೌರವಿಸಿದ್ದೂ ಅಷ್ಟೇ ಮುಖ್ಯ. ಈಗ ಕಲಿಯುಗದಲ್ಲಿ ಅನೇಕ ಸಲ ಏನಾಗುತ್ತದೆಂದರೆ, ನಿರ್ಮಲ ಮನಸ್ಸಿ ನಿಂದ ನಿಸ್ವಾರ್ಥ ಭಾವದಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಕೆಲಸ ಮಾಡುವ ‘ಅಳಿಲು’ಗಳು ಎಲ್ಲೆಡೆಯೂ ಬೇಕಾದಷ್ಟು ಕಾಣಸಿಗುತ್ತವೆ; ಆದರೆ ಅವುಗಳ ಸೇವೆಯನ್ನು ಗುರುತಿಸಿ ಗೌರವಿಸುವ ‘ಶ್ರೀರಾಮಚಂದ್ರ’ರು ಬಲು ಅಪರೂಪ.
ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂದು ಬೀಗುವವರ ಸಂಖ್ಯೆಯೇ ಹೆಚ್ಚು. ಬೇಕಿದ್ದರೆ ನೋಡಿ ಎರಡು-ಮೂರು ಜನರಷ್ಟೇ ಇರುವ ಚಿಕ್ಕ ಚಿಕ್ಕ ಸಂಸಾರಗಳಿಂದ ಹಿಡಿದು ಬಹುರಾಷ್ಟ್ರೀಯ ಕಾರ್ಪೊರೆಟ್ ಕಂಪನಿಗಳವರೆಗೆ, ಅಥವಾ ಲಾಭರಹಿತ ಉದ್ದೇಶದಿಂದ ಆರಂಭವಾಗಿ ಆಮೇಲೆ ರಾಜಕೀಯವನ್ನು ಮೆತ್ತಿಕೊಂಡು ಅಧ್ವಾನದ ಕೂಪಗಳಾಗುವ ಸಂಘ ಸಂಸ್ಥೆಗಳಲ್ಲೂ, ಕೂಟ – ಒಕ್ಕೂಟಗಳಲ್ಲೂ, ‘ಅಳಿಲು’ಗಳು ಒಂದೆರಡಾದರೂ ಇದ್ದೇ ಇರುತ್ತವೆ; ಅವುಗಳ ಸೇವೆಯ ಗುರುತಿಸುವಿಕೆ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ.

No comments: