ಶರನ್ನವರಾತ್ರಿ ಅಂತ ಕರೆಯುವುದೇಕೆ?

ಶರನ್ನವರಾತ್ರಿ ಅಂತ ಕರೆಯುವುದೇಕೆ? 

ವಸಂತ ಋತುವಿನ ಚೈತ್ರಮಾಸದ ಪ್ರತಿಪತ್ತಿನಿಂದ ಒಂಬತ್ತು ದಿನ ಆಚರಿಲ್ಪಡುವ ಪರ್ವವನ್ನು ವಸಂತ ನವರಾತ್ರವೆಂದು, ಶರದ ಋತುವಿನ ಪ್ರಥಮೆಯಿಂದ ನವಮಿ ಪರ್ಯಂತ ಆಚರಿಸುವ ಈ ಪರ್ವವನ್ನು ಶರನ್ನವರಾತ್ರಿ ಎಂದು ಕರೆಯುತ್ತಾರೆ. 

'ಬನ್ನಿ ಗಿಡ' ಎಂಬ ಪದ ಹೇಗೆ? 
ಸಂಸ್ಕೃತ ಭಾಷೆಯಲ್ಲಿ ವಹ್ನಿ ಎಂದರೆ ಬೆಂಕಿ, ಕನ್ನಡದಲ್ಲಿ ಬನ್ನಿ ಎಂದಾಗಿದೆ. 

ಶಮಿವೃಕ್ಷದ ಮಹತ್ವ

ಶಮ ಎಂದರೆ ಇಂದ್ರಿಯಾದಿಗಳ ನಿಗ್ರಹ, ಇದನ್ನು ಹೊಂದಿದ ಮರವೇ ಶಮಿ ವೃಕ್ಷ. ವಿಜಯಯಾತ್ರೆಗೆ ತೆರಳುವ ಕ್ಷತ್ರಿಯನಿಗೂ, ಆತ್ಮಯಾತ್ರೆಗೆ ತೊಡಗುವ ಯತಿಗೂ, ವಿದ್ಯಾಭಾಸಕ್ಕೆ ತೊಡಗುವ ವಿದ್ಯಾರ್ಥಿಗೂ ಇಂದ್ರಿಯ ಮತ್ತು ಮನಸ್ಸಿನ ನಿಗ್ರಹ ಬಹು ಮುಖ್ಯ, ಅದಕ್ಕಾಗಿಯೇ ಶಮಿ ವೃಕ್ಷದ ಪೂಜೆ. 

'ಶಮೀ ಶಮಯತೇ ಪಾಪಂ' ಶಮಿ ವೃಕ್ಷವೂ ಪಾಪವನ್ನು ನಾಶ ಮಾಡುವುದು. 

ನವರಾತ್ರಿಯ ಒಂಬತ್ತು ದಿನ ದೇವಿಯ ಅವತಾರಗಳು - 
1. ಶೈಲಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರಘಂಟಾ
4. ಕೂಷ್ಮಾoಡಾ
5. ಸ್ಕಂದಮಾತಾ
6. ಕಾತ್ಯಾಯನಿ
7. ಸರಸ್ವತಿ
8. ದುರ್ಗಾ
9. ಮಹಾಗೌರಿ


ಜೀವನಕ್ಕೆ ನವತ್ವ ಅಂದರೆ ಹೊಸದನ್ನು ಉಂಟು ಮಾಡುವ ಹಬ್ಬ ನವರಾತ್ರಿ. 

ಈ ನವರಾತ್ರಿಯೂ ಎಲ್ಲರಿಗೂ ಶುಭವನ್ನುಂಟುಮಾಡಲಿ.

ಪಾಂಡವರು ಒಂಬತ್ತು ದಿನಗಳ ಕಾಲ ಶಕ್ತಿ ರೂಪಿಯಾದ ದುರ್ಗೆಯನ್ನು ಆರಾಧಿಸಿ ಶಮೀ ವೃಕ್ಷದಲ್ಲಿ ತಮ್ಮ ಆಯುಧಗಳನ್ನಿಟ್ಟು ವಿಜಯದಶಮಿಯ ದಿನ ಅಜ್ಞಾತ ವಾಸಕ್ಕಾಗಿ ವಿರಾಟನಗರ ಪ್ರವೇಶಿಸುತ್ತಾರೆ. 

ಪ್ರಭು ಶ್ರೀರಾಮನು ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿಯ ದಿನದಿಂದ ವಿಜಯ ಯಾತ್ರೆಯನ್ನು ಪ್ರಾರಂಭಿಸುತ್ತಾನೆ.

ನಿಮಗೆ ಗೊತ್ತಿರುವ ಮಾಹಿತಿಯನ್ನು ಕಾಮೆಂಟನಲ್ಲಿ ತಿಳಿಸಿ.

🙏🏽🚩🙏🏽
ಶರನ್ನವರಾತ್ರಿ ಅಂತ ಕರೆಯುವುದೇಕೆ? ಶರನ್ನವರಾತ್ರಿ ಅಂತ ಕರೆಯುವುದೇಕೆ? Reviewed by Super_Maa on September 26, 2022 Rating: 5

2 comments:

  1. ತುಂಬಾ ಸರಳವಾಗಿ ತಿಳಿಸಿದ್ದಕ್ಕೆ, ಧನ್ಯವಾದಗಳು.

    ReplyDelete

Powered by Blogger.