ಉತ್ತಮ ಜೀವನದ ಹತ್ತು ಸೂತ್ರಗಳು - 10 Qualities of Good Life Kannada

 ಪರಿಣಾಮಕಾರಿ ಜೀವನ ನಡೆಸಲು ಉಪಯೋಗವಾಗುವ ಹತ್ತು ಸಾಮರ್ಥ್ಯಗಳನ್ನು ತಿಳಿಯಿರಿ. 



1. ನಿರ್ಣಯ ಸಾಮರ್ಥ್ಯ (Decision Making)

ಒಂದು ಶಿಸ್ತಿನ ಜೀವನ ನಡೆಸುತ್ತಿದ್ದರೆ ಯಾವುದೇ ಸಂಧರ್ಭದಲ್ಲಿ ಯಾವುದೇ ವಿಷಯದಲ್ಲಾದರೂ ಒಂದು ನಿರ್ಣಯಕ್ಕೆ ಬರಬಹುದು.

 

2. ಸಮಸ್ಯಾ ಪರಿಹಾರ ( Problem Solving)

ನಾವು ಸಮಸ್ಯೆಗಳಿಂದ ದೂರವಾಗಲು ಪ್ರಯತ್ನಿಸಿದರೆ ಉತ್ತಮರಾಗುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಸಮಸ್ಯೆಗಳನ್ನು ಎದುರಿಸಿಯೇ ಶಕ್ತಿಶಾಲಿಗಳಾಗಬೇಕು. 

ಎಷ್ಟೋ ವೇಳೆ ನಮಗೆ ನಾವೇ ಸಮಸ್ಯೆಯಾಗಿರುತ್ತೇವೆ. ನಮ್ಮನ್ನು ನಾವು ಸರಿಪಡೆಸಿಕೊಂಡರೆ ಬೇರೆಲ್ಲ ಸಮಸ್ಯೆಗಳನ್ನು ಎದುರಿಸಬಹುದು.


3. ವಿಮರ್ಶಾತ್ಮಕ ಚಿಂತನೆ ( Critical Thinking)

ಸ್ವಂತ ಆಲೋಚನಾ ಶಕ್ತಿ ಇಲ್ಲದಿದ್ದರೆ ನಾವು ಬಹುಬೇಗ ಇತರರ ಪ್ರಭಾವಕ್ಕೆ ಒಳಗಾಗುತ್ತೇವೆ. ನಮ್ಮ ವಿಚಾರ ಶಕ್ತಿಯ ಮೂಲಕ ಚೆನ್ನಾಗಿ ವಿಮರ್ಶಿಸಿ ಯಾವುದನ್ನು ಸ್ವೀಕರಿಸಬೇಕು ಯಾವುದು ಬೇಡ ಎಂದು ಅರಿಯುವ ಗುಣ ನಮ್ಮಲ್ಲಿರಬೇಕು.


4. ರಚನಾತ್ಮಕ ಚಿಂತನೆ (Creative Thinking)

ನಮ್ಮೆಲ್ಲರಲ್ಲಿಯೂ ಏನನ್ನಾದರೂ ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಇದನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳಬೇಕು. ಹೊಸ ಬಗೆಯಲ್ಲಿ ಕೆಲಸ ಮಾಡುವುದನ್ನು, ಹೊಸ ರೀತಿಯಲ್ಲಿ ಆಲೋಚಿಸುವುದನ್ನು , ಹೊಸ ದೃಷ್ಟಿಕೋನದಿಂದ ವಿಷಯನ್ನು ನೋಡುವುದನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸ ಮಾಡಬೇಕು. 


5. ಪರಿಣಾಮಕಾರಿ ಸಂವಾದ ( Effective Communication)

ನಮ್ಮ ಭಾವಣೆಗಳನ್ನು ಮತ್ತು ವಿಚಾರಗಳನ್ನು ಸ್ಪಷ್ಟವಾಗಿ, ತಪ್ಪು ಕಲ್ಪನೆಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ನಾವು ಪಡೆಯಬೇಕು. ನಮ್ಮ ಮಾತಿನ ಮೇಲೆ ಹೆಚ್ಚು ನಿಗಾ ಇರಬೇಕು. 

ನಾವು ಹೇಳಬೇಕಾದುದನ್ನು ಮಿತಭಾಷೆಯಲ್ಲಿ ಸ್ಪಷ್ಟವಾಗಿ ಪರಿಣಾಮಕಾರಿಯಾಗಿ ಹೇಳುವುದು ಒಂದು ಶ್ರೇಷ್ಠ ಕಲೆ.


6. ಪರಸ್ಪರ ಸಂಬಂಧ (Interpersonal Relationship)

ಸಮಾಜದಲ್ಲಿ ಯಾರು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ. ನಮ್ಮ ವಯಕ್ತಿಕತೆಯನ್ನು ತೊರೆದು ಇತರರೊಡನೆ ಸ್ಪಂದಿಸುವ ಸಾಮರ್ಥ್ಯವನ್ನು ಪಡೆದಿರಬೇಕು. 


7. ಆತ್ಮಪ್ರಜ್ಞೆ (Self-awareness)

ನಾವು ಪ್ರಜ್ಞಾಪೂರ್ವಕವಾಗಿ ಜೀವನ ನಡೆಸಬೇಕು. ಯಂತ್ರಗಳಂತೆ ಕೆಲಸ ಮಾಡಬಾರದು.


8. ಇತರರಲ್ಲಿ ತನ್ನನ್ನು ಕಾಣುವುದು ( Empathy)

ಯಾವುದು ನಮಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವುದೋ ಅದನ್ನು ಇತರರಿಗೂ ಮಾಡಬಾರದು.


9. ಭಾವೋದ್ವೇಗವನ್ನು ನಿಗ್ರಹಿಸುವುದು ( Coping with Emotions)

ಕೋಪ, ದ್ವೇಷ, ವ್ಯಾಮೋಹ ಇತ್ಯಾದಿ ಭಾವೋದ್ವೇಗಗಳಿಗೆ ವಶರಾಗಿ ನಾವು ಎಷ್ಟೋ ತಪ್ಪುಗಳನ್ನುಮಾಡುತ್ತೇವೆ. ಇದರಿಂದ ನಮಗೂ ಹಾನಿ, ಇತರರಿಗೂ ಹಾನಿ. 


10. ಒತ್ತಡವನ್ನು ಸಹಿಸಿಕೊಳ್ಳುವುದು ( Coping with Stress)

ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ ಎಂಬುದನ್ನು ಅರಿತು, ಅನಿವಾರ್ಯವಾದುದನ್ನು ಶಾಂತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.


10 Qualities of Good Life Kannada.


Thank You for reading. Comment your opinion. If you like it please share it with your circle.


Bookmark our website for latest updates. Comment if you what to share your content with us. 


Jai Hind








ಉತ್ತಮ ಜೀವನದ ಹತ್ತು ಸೂತ್ರಗಳು - 10 Qualities of Good Life Kannada ಉತ್ತಮ ಜೀವನದ ಹತ್ತು ಸೂತ್ರಗಳು - 10 Qualities of Good Life Kannada Reviewed by Super_Maa on September 13, 2022 Rating: 5

No comments:

Powered by Blogger.