ಮದನಲಾಲ್ ಧಿಂಗ್ರ್ ಸ್ಮರಣೆ - Madanalal Dhingra Kannada
ಮದನಲಾಲ್ ಧಿಂಗ್ರ್
ಸಾವರ್ಕರ ಸೃಷ್ಟಿಸಿದ ಕ್ರಾಂತಿಕಾರಿ.
ವೀರ ಸಾವರ್ಕರ ಹೆಸರೇ ಹೇಳುವಂತೆ ಸ್ವತಃ ವೀರರಾಗಿ ದೇಶಕ್ಕಾಗಿ ವೀರರನ್ನು ತಯಾರು ಮಾಡಿದ ಫ್ಯಾಕ್ಟರಿ ಎಂದರೆ ತಪ್ಪಾಗಲಾರದು. ದೇಶಕ್ಕಾಗಿ, ಧರ್ಮಕ್ಕಾಗಿ, ಸ್ವತಂತ್ರಕ್ಕಾಗಿ ಅದೆಷ್ಟೋ ಜನರಿಗೆ ಪ್ರೇರಣೆ ಆದವರು ಸಾವರ್ಕರ. ಅವರ ಬಗ್ಗೆ ಅಧ್ಯಯನ ಮಾಡಿದರೆ ಇದರ ಬಗ್ಗೆ ತಿಳಿದಿತು.
ಮದನಲಾಲ ಎಂಬ ಶ್ರೀಮಂತ ಯುವಕ ಲಂಡನನಲ್ಲಿ ಓದಲು ಹೋದಾಗ ಅವನ ಜೀವನವನ್ನು ಮೋಜು ಮಸ್ತಿಗಾಗಿ ಮೀಸಲಿಟ್ಟಿದ್ದ. ಮದನಲಾಲ ಎಂಬ ಶೋಕಿಲಾಲ ವ್ಯಕ್ತಿತ್ವದ ವ್ಯಕ್ತಿ ಲಂಡನನಲ್ಲಿ ಓದಲು ಇದ್ದಾಗ ಅವನಿಗೆ ದೇಶಭಕ್ತಿ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ ಎಂಬುದನ್ನು ನಾವು ನೀವು ನಂಬಲೇಬೇಕು. ಸಾವರ್ಕರ ಎಂಬ ಶಕ್ತಿಯ ಪರಿಚಯವಾದಾಗ ಮದನಲಾಲ ದಿಂಗ್ರಾ ನಿಧಾನವಾಗಿ ಬದಲಾಗತೊಡಗಿದ. ಸಾವರ್ಕರ ಅವರ ಚಿಂತನೆಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾ ಕ್ರಾಂತಿಕಾರಿಯಾಗಿ ಪರಿವರ್ತನೆಗೊಂಡ.
ಸಾವರ್ಕರ ಮದನಲಾಲಗೆ ಕರ್ಜನ್ ವೈಲಿಯನ್ನು ಹತ್ಯೆ ಮಾಡಲು ಹೇಳಿದಾಗ, ಅಲ್ಲಿಯ ತನಕ ಬಂದೂಕು ಹಿಡಿಯದ ಮದನಲಾಲ ಹಿಂದು ಮುಂದೆ ನೋಡದೆ ಒಪ್ಪಿಕೊಂಡಿದ್ದ. ಅಷ್ಟರ ಮಟ್ಟಿಗೆ ಸಾವರ್ಕರರವರ ಮಾತನ್ನು ಪಾಲಿಸುತ್ತಿದ್ದ. ಮೊದಲ ಬಾರಿಗೆ ವೈಲಿಗೆ ಗುಂಡು ಹಾರಿಸಲು ವಿಫಲನಾಗಿ ಎರಡನೇ ಬಾರಿಗೆ ಪಾಯಿಂಟ್ ಶೂಟ್ ಮಾಡಿ ವೈಲಿಯನ್ನು ಹತ್ಯೆಗೈದ ಕ್ರಾಂತಿಕಾರಿ ಮದನಲಾಲ ದಿಂಗ್ರಾ ದೇಶಕ್ಕಾಗಿ ಬಲಿದಾನವಾಗಲು ತಯಾರಿಯಾಗಿ ನಿಂತಿದ್ದ.
ಭಾರತಮಾತೆಯ ಕುರಿತು "ನಿನ್ನಂಥ ದೊಡ್ಡ ತಾಯಿಗೆ ನನ್ನಂಥ ದಡ್ಡ ಮಗ ಪ್ರಾಣವನ್ನು ಕೊಡಲು ಬಿಟ್ಟು ಇನ್ನೇನು ಸಾಧ್ಯ" ಎಂಬ ಮಾತನ್ನು ಹೇಳುವ ಮಟ್ಟಿಗೆ ಸಾವರ್ಕರ ಮದನಲಾಲ ದಿಂಗ್ರಾನ ಚಿಂತನೆಯನ್ನು ಬದಲಾಯಿಸಿಬಿಟ್ಟಿದ್ದರು ಎಂದರೆ ಅತಿಶಯೋಕ್ತಿಯೆನ್ನಲ್ಲ.
ಸಾವರ್ಕರ ಎಂಬ ಶಕ್ತಿ ತಯಾರಿಸಿದ ಮದನಲಾಲ ದಿಂಗ್ರಾ ಎಂಬ ವ್ಯಕ್ತಿ ದೇಶಕ್ಕಾಗಿ ಬ್ರಿಟಿಷ ಅಧಿಕಾರಿಯನ್ನು ಕೊಂದು ಉರುಳಿಗೆ ಚುಂಬಿಸಿ ಕೊರಳಿಗೆ ಹಾಕಿಕೊಂಡಿದ್ದು ಅಗಸ್ಟ್ 17ರಂದು ಅಂದರೆ ಇಂದು.
ಗಲ್ಲಿಗೇರಿಸಿದ ದಿನದಂದು ದೇಶಕ್ಕಾಗಿ ಪ್ರಾಣ ನೀಡಿದ ಮದನಲಾಲ ದಿಂಗ್ರಾ & ಅವನನ್ನು ಪ್ರೇರೆಪಿಸಿದ ಸಾವರ್ಕರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂಬುದು ನೆನಪಿರಲಿ.
Comment your opinions
Share this to your circle if you found this useful.
Thank You
#madanlaldinghra #VeerSavarkar
ಮದನಲಾಲ್ ಧಿಂಗ್ರ್ ಸ್ಮರಣೆ - Madanalal Dhingra Kannada
Reviewed by Super_Maa
on
August 17, 2022
Rating:

No comments: