ವ್ಯಕ್ತಿತ್ವ ಮತ್ತು ಚಾರಿತ್ರ್ಯ ವ್ಯತ್ಯಾಸ ಏನು?

 ಇಂದಿನ ಜಗತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಅಂದರೆ Personality Developmentಗೆ ಬಹಳ ಮಹತ್ವ ನಿಡುತ್ತದೆ. ಆದರೆ ಒಬ್ಬ ವ್ಯಕ್ತಿ ಹೇಗಿದಾನೆ ಅಂತ ತಿಳಿದುಕೊಳ್ಳಲು ವ್ಯಕ್ತಿತ್ವಕ್ಕಿಂತ ಮುಖ್ಯವಾಗಿ ಅವನ ಚಾರಿತ್ರ್ಯ (Character) ಹೇಗಿದೆ ಅನ್ನುವುದುರ ಮೂಲಕ ಗೊತ್ತಾಗುತ್ತದೆ. ಆದರೆ ನಿಮ್ಮಲ್ಲಿ ಬಹುತೇಕರಿಗೆ ಈ ಚಾರಿತ್ರ್ಯ ಅಂದರೆ ಏನು ಅಂತಾನೆ ಗೊತ್ತಿರೊಲ್ಲ. ವಿವೇಕಾನಂದರ ಪುಸ್ತಕಗಳನ್ನ ಓದುವವರಿಗೆ ಸ್ವಲ್ಪ ಈ ಚಾರಿತ್ರ್ಯ ಪದದ ದರ್ಶನ ಆಗಿರುತ್ತೆ ಆದರು ಬಹುತೇಕರು ಅರ್ಥ ಹುಡುಕಿರುವುದಿಲ್ಲ. 


ಬನ್ನಿ ಹಾಗಾದರೇ ಇವತ್ತಿನ Blogನಲ್ಲಿ ಇದರ ಅರ್ಥ ತಿಳಿಯೋಣ.


ಇಂಗ್ಲಿಷನಲ್ಲಿ ಹೇಳಬೇಕೆಂದರೆ ವ್ಯಕ್ತಿತ್ವವನ್ನು ನಾವು Personality ಮತ್ತು ಚಾರಿತ್ರ್ಯವನ್ನು Character ಅಂತ ಅಂದುಕೊಳ್ಳಬಹುದು. 


ಇಂಗ್ಲಿಷನಲ್ಲಿ ಓಂದು ವಾಕ್ಯ ಇದೆ ಈ ವಾಕ್ಯ ನಮಗೆ ಸರಿಯಾದ ಅರ್ಥವನ್ನೆ ಕೊಡುತ್ತದೆ. 


"PERSONALITY" is what you do when everybody is watching. (PUBLIC)

"CHARACTER" is what you do even when nobody is watching you. (PRIVATE)


Kannada meaning

ಇದರ ಅರ್ಥ ಏನೆಂದರೆ- 

ಎಲ್ಲರೂ ನಮ್ಮನ್ನು ನೋಡುತ್ತಿರುವಾಗ ನಾವೇನು ಮಾಡುತ್ತೆವೆ ಅದು ನಮ್ಮ "ವ್ಯಕ್ತಿತ್ವ". 

ಮತ್ತು

ಯಾರು ನೋಡದೆ ಇರುವಾಗ ನಾವೇನು ಮಾಡುತ್ತೆವೆ ಅದು ನಮ್ಮ "ಚಾರಿತ್ಯ" ಅಂತ. 


ಈಗ ನೀವೆ ನಿರ್ಧರಿಸಿ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಎಲ್ಲರೂ ಒಳ್ಳೆಯ ಚಾರಿತ್ರ್ಯವನ್ನು ಹೊಂದಿರುತ್ತಾರೆಯೇ ಅಂತ. ಅದಕ್ಕೆ ಹೆಳುವುದು ಒಂದು ಪರಿಪೂರ್ಣ ಮನುಷ್ಯ ಅಂದರೆ ಅವನು ವ್ಯಕ್ತಿತ್ವ ಮತ್ತು ಚಾರಿತ್ರ್ಯ ಏರಡನ್ನು ಸರಿಯಾಗಿ ಹೊಂದಿರಬೇಕು. ನಮ್ಮ ಕಣ್ಣ ಮುಂದೆ ಈ ರೀತಿ ಏಲ್ಲರೂ ಇರುವಾಗ ಓಳ್ಳೆಯ ಕೆಲಸವನ್ನು ಮಾಡುವ ವ್ಯಕ್ತಿಗಳು, ಯಾರು ಇಲ್ಲದಿರುವಾಗ ಅಥವಾ ಕೆಲವರ ಜೊತೆ ಸೇರಿ ಕೆಟ್ಟ ಕೆಲಸ ಮಾಡುತ್ತಾರೆ ಅಲ್ಲವೇ? 

ನಾವು ನಾಲ್ಕು ಜನರ ಮುಂದೆ ನಮ್ಮ ಓಳ್ಳೆಯ ವ್ಯಕ್ತಿತ್ವ ತೊರಿಸುವುದರ ಜೊತೆಗೆ ಒಬ್ಬರೇ ಇರುವಾಗ ಕೂಡ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಈ ಸಂಗತಿ ಇಂದಿನ ಯುವಜನತೆಗೇ ತುಂಬಾ ಅವಶ್ಯಕತೆ ಇದೆ ಅಲ್ಲವೇ? 

ಅದಕ್ಕೆ ನಾವು ಯಾವುದೇ ವ್ಯಕ್ತಿಯನ್ನು ಈ ಎರ‍ಡು ಗುಣಗಳಿಂದ ಗುರುತಿಸಬೇಕು. ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ. 


ಈ ವಿಶಯ ಬೇರೆಯವರಿಗೆ ಅವಶ್ಯಕತೆ ಇದೆ ಅನಿಸಿದರೆ ಕೂಡಲೇ ಅವರಿಗೆ ಶೇರ ಮಾಡಿ .

Click below to share with your circle on WhatsApp directly

 Share on Whatsapp 
ವ್ಯಕ್ತಿತ್ವ ಮತ್ತು ಚಾರಿತ್ರ್ಯ ವ್ಯತ್ಯಾಸ ಏನು? ವ್ಯಕ್ತಿತ್ವ ಮತ್ತು ಚಾರಿತ್ರ್ಯ ವ್ಯತ್ಯಾಸ ಏನು? Reviewed by Super_Maa on May 20, 2021 Rating: 5

No comments:

Powered by Blogger.